ಸಿದ್ಧಾಪುರ: ಬಳ್ಳಟ್ಟೆ ಬಳಿ ಗದ್ದೆಗೆ ಇಳಿದ ಸಾರಿಗೆ ಬಸ್, ತಪ್ಪಿದ ಅನಾಹುತ
ಸಿದ್ದಾಪುರ : ಸಾರಿಗೆ ಇಲಾಖೆಯ ಬಸ್ಸಿನ ಎಕ್ಸೆಲ್ ಕಟ್ಟಾಗಿ ಗದ್ದೆಗೆ ನುಗ್ಗಿದ ಘಟನೆ ಗುರವಾರ ಬಳ್ಳಟ್ಟೆ ಬಳಿ ನಡೆದಿದೆ. ಕೂದಳೆಯ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ನಲ್ಲಿ 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಶಿರಸಿ ಹರಿಶಿ ಚಂದ್ರಗುತ್ತಿ ಮಾರ್ಗವಾಗಿ ಸಿದ್ದಾಪುರಕ್ಕೆ ಹೋಗುತ್ತಿದ್ದ ಬಸ್ ಇದಾಗಿತ್ತು. ದಾರಿ ಮಧ್ಯದಲ್ಲಿ ಎಕ್ಸೆಲ್ ಕಟ್ಟಾಗಿ ಗದ್ದೆಗೆ ಇಳಿದಿದ್ದು, ಯಾರಿಗೂ ತೊಂದರೆಯಾಗದೇ ದೊಡ್ಡ ಅನಾಹುತ ತಪ್ಪಿದಂತಾಗಿದೆ.