ಸಿದ್ಧಾಪುರ: ಬಸವಣ್ಣ ಗಲ್ಲಿ ವೃದ್ಧೆ ಕೊಲೆ ಪ್ರಕರಣ, ಆರೋಪಿಯನ್ನು ಬಂಧಿಸಿದ ಸಿದ್ದಾಪುರ ಪೊಲೀಸರು
ಸಿದ್ದಾಪುರ : ಸಿದ್ದಾಪುರದ ಬಸವಣ್ಣ ಗಲ್ಲಿಯಲ್ಲಿ ನಡೆದಿದ್ದ ವೃದ್ಧೆ ಹತ್ಯೆಯ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿದ್ದಾಪುರ ತಾಲೂಕಿನ ಕೊಂಡ್ಲಿಯ ಅಭಿಜಿತ್ ಮಡಿವಾಳ (30) ಕೊಲೆ ಮಾಡಿದ ಆರೋಪಿ. ಕಳೆದ ಸೋಮವಾರ ಬಸವಣ್ಣ ಗಲ್ಲಿಯಲ್ಲಿ ಪಿಗ್ಮಿ ಸಂಗ್ರಾಹಕಿಯಾಗಿದ್ದ ಗೀತಾ ಹುಂಡೇಕರ್ ಕೊಲೆಯಾಗಿತ್ತು. ಕಳ್ಳತನಕ್ಕಾಗಿ ಹೋಗಿದ್ದ ಆರೋಪಿ ಕಳ್ಳತನ ನಡೆಸಿ ವೃದ್ಧೆಯನ್ನ ಕೊಲೆಗೈದಿದ್ದ. ವೃದ್ಧೆಯ ಹತ್ತಿರ ಇದ್ದ ಹಣ ಹಾಗೂ ಅವಳ ಕಿವಿ ಓಲೆಗಳನ್ನು ಕಳ್ಳತನ ಮಾಡಿ ಆರೋಪಿ ಪರಾರಿಯಾಗಿದ್ದ.