ಬೆಂಗಳೂರು ಉತ್ತರ: ಕ್ಯಾಬಿನೆಟ್ ನಲ್ಲಿ 3 ನಿರ್ಣಯ ತೆಗೆದುಕೊಂಡಿದ್ದೇವೆ: ನಗರದಲ್ಲಿ ಎಚ್.ಕೆ ಪಾಟೀಲ್
ಸಚಿವ ಎಚ್ ಕೆ ಪಾಟೀಲ್ ಅವರು ಬುಧವಾರ ನಡೆದ ವಿಶೇಷ ಕ್ಯಾಬಿನೆಟ್ ಕುರಿತು ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಈ ಕ್ಯಾಬಿನೆಟ್ ಸಭೆಯಲ್ಲಿ ಮೂರು ನಿರ್ಣಯಗಳನ್ನು ಮಾಡಿದ್ದೇವೆ. ವಿಧಾನಸಭೆ ಅಧಿವೇಶನ ವನ್ನು 22 ಜನವರಿ 11 ಗಂಟೆಗೆ ಕರೆಯಲು ಕ್ಯಾಬಿನೆಟ್ ತೀರ್ಮಾನ ಮಾಡಿದೆ. ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ, ರಾಜ್ಯಪಾಲರ ಜಂಟಿ ಭಾಷಣ ಅನುಮೋದನೆಗೆ ಸಿಎಂ ಪರಮಾಧಿಕಾರ. ವಿಬಿಜಿ ರಾಮ್ ಜಿ ಕಾಯ್ದೆ 2025 ಸಮಾಜದ ಮೇಲೆ ಬೀರುವ ಪರಿಣಾಮಗಳ ಕುರಿತು ಜಂಟಿ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಜಂಟಿ ಸದನ 22 ರಂದು ಪ್ರಾರಂಭವಾಗಿ ಜನವರಿ 31 ರವರೆಗೆ ಸದನ ನಡೆಸಲು ತೀರ್ಮಾನ ಮಾಡಲಾಗಿದೆ,