ಸಾಗರ: ಅಡಿಕೆ ಬೆಳೆ ಮೇಲೆ ಅನಗತ್ಯವಾಗಿ ದೂರುವುದು ನಿಲ್ಲಬೇಕು, ಸಾಗರದಲ್ಲಿ ನಿವೃತ್ತ ಕುಲಪತಿ ಡಾ.ವಿಘ್ನೇಶ್
Sagar, Shimoga | Nov 28, 2025 ಸಾಗರ : ಅಡಿಕೆ ಬೆಳೆ ಮತ್ತು ಬೆಲೆ ಮೇಲೆ ಆಘತವಾದರೆ ಬೆಳೆಗಾರರು ಸಹಿಸಿಕೊಳ್ಳುವುದಿಲ್ಲ. ಇದೀಗ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ರೋಗಬಾಧೆ ಕಂಡು ಬಂದಿದ್ದರೇ, ಅಡಿಕೆ ಕಾನೂನು ಸಂಕಷ್ಟ ಎದುರಿಸುವಂತೆ ಆಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ವಿಘ್ನೇಶ್ ಹೇಳಿದರು. ಸಾಗರದ ಪ್ರವಾಸಿ ಮಂದಿರದಲ್ಲಿ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಅಡಿಕೆ ಹಾನಿಕಾರಕವಲ್ಲ ಎಂಬ ವಿಷಯ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿ ಶುಕ್ರವಾರ ಸಂಜೆ 6 ಗಂಟೆಗೆ ಮಾತನಾಡಿದ ಅವರು, ಅಡಿಕೆ ಬೆಳೆಗಾರ ಸುಧಾರಿಸಿಕೊಳ್ಳಲಾಗದಷ್ಟು ಸಂಕಷ್ಟ ಎದುರಾಗುತ್ತಿದೆ. ಇದರ ಜೊತೆಗೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಅಂಶ ರೈತರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ