ಕಾಗವಾಡ: ಉಗಾರ ಖುರ್ದ್ನಲ್ಲಿ ಪ್ರಜಾ ಸೇವಾ ಆಂದೋಲನ: ಜನರ ಸಮಸ್ಯೆ ಆಲಿಸಿದ ಶಾಸಕ ರಾಜು ಕಾಗೆ
ಉಗಾರ ಖುರ್ದ್ ಪಟ್ಟಣದಲ್ಲಿ ನಡೆದ ಪ್ರಜಾ ಸೇವಾ ಆಂದೋಲನದಲ್ಲಿ ಶಾಸಕ ರಾಜು ಕಾಗೆ ಸಾರ್ವಜನಿಕರ ಅಹವಾಲು ಆಲಿಸಿದರು. ಅಮೃತ್-2 ಯೋಜನೆಯ ರಸ್ತೆ ಗುಂಡಿಗಳ ಸಮಸ್ಯೆ ಹಾಗೂ ಅಪೂರ್ಣ ಕಾಮಗಾರಿಗಳ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.