ಮಾಗಡಿ: ರೈತರ ತೋಟದಲ್ಲಿ 6 ಬಾಳೆ ಗೊನೆ ಕಳವು, ಒಂದು ವಾರದ ಅಂತರದಲ್ಲಿ ಮತ್ತೆ ಕಳ್ಳರ ಕೈಚಳಕ
ಮಾಗಡಿ ತಾಲೂಕಿನ ಮಾಡಬಾಳ್ ಹೋಬಳಿ ವೀರೇಗೌಡನ ದೊಡ್ಡಿ ಗ್ರಾಮದಲ್ಲಿ ಚಂದ್ರಶೇಖರ್ ಎಂಬುವವರ ತೋಟದಲ್ಲಿ 6 ಬಾಳೆ ಗೊನೆಗಳನ್ನು ಕಳ್ಳರು ದೋಚಿದ್ದಾರೆ. ಒಂದು ವಾರದ ಹಿಂದೆಯಷ್ಟೇ 3 ಗೊನೆಗಳು ಕಳ್ಳತನವಾಗಿದ್ದವು. ಪದೇ ಪದೇ ನಡೆಯುತ್ತಿರುವ ಕಳ್ಳತನದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.