ಬೆಂಗಳೂರು ಉತ್ತರ: ಮಲ್ಲೇಶ್ವರದಲ್ಲಿ ‘ಮುರುಗ ಸನ್ ಆಫ್ ಕಾನೂನು’ ಚಿತ್ರಕ್ಕೆ ಶುಭಹಾರೈಸಿದ ಹೂವಿನ ಹಡಗಲಿ ಶಾಸಕ ಕೃಷ್ಣ ನಾಯಕ್
ಕಿರುತೆರೆಯ ಮುರುಗ ಖ್ಯಾತಿಯ ನಟ ಮುನಿಕೃಷ್ಣ ನಾಯಕನಾಗಿ ನಟಿಸಿದ್ದ ಕೊಡೆಮುರುಗ ಚಿತ್ರ ಅದ್ಭುತ ಯಶಸ್ಸು ಕಂಡಿತ್ತು. ಆ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮುನಿಕೃಷ್ಣ ಅವರೀಗ ತಮ್ಮ ಎರಡನೇ ಚಿತ್ರವನ್ನು ತೆರೆಗೆ ತರಲು ಹೊರಟಿದ್ದಾರೆ. ಆ ಚಿತ್ರದ ಹೆಸರು ‘ಮುರುಗ ಸನ್ ಆಫ್ ಕಾನೂನು’. ಇದೀಗ ಇದೇ ಸಿನಿಮಾ ಶೀಘ್ರದಲ್ಲಿ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಬುಧವಾರ ಸಂಜೆ ೪ ಗಂಟೆ ಸುಮಾರಿಗೆ ಮಲ್ಲೇಶ್ವರಂನಲ್ಲಿ ಈ ಚಿತ್ರದ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ಸುದ್ದಿಗೋಷ್ಠಿಗೆ ಹೂವಿನ ಹಡಗಲಿಯ ಶಾಸಕ ಕೃಷ್ಣ ನಾಯಕ, ಅತಿಥಿಯಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭಕೋರಿದರು. ಇದೇ ವೇಳೆ ಶಾಸಕರಿಗೆ ಚತ್ರತಂಡ ಪುನೀತ್ ರಾಜ್‌ಕುಮಾರ್ ಅವರ ಫೋಟೋ ನೀಡಿ, ಗೌರವಿಸಿತು.