ಬೆಂಗಳೂರು ಉತ್ತರ: ನನ್ನ ಮೇಲೆ ಸಸಿಕಾಂತ್ ಸೆಂಥಿಲ್ ಆಧಾರ ರಹಿತ ಆರೋಪ ಮಾಡಿದ್ದಾರೆ: ನಗರದಲ್ಲಿ ಶಾಸಕ ಜನಾರ್ಧನ ರೆಡ್ಡಿ
ವಿಧಾನಸೌಧದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಸತ್ಯ ಮಾಡಲು ಹೊರಟಿರುವ ವ್ಯಕ್ತಿಗಳ ಹಿಂದೆ ಮಾಸ್ಟರ್ ಮೈಂಡ್ ಸಸಿಕಾಂತ್ ಸೆಂಥಿಲ್ ಎಂದು ಹೇಳಿದ್ದೆ. ಆಧಾರ ರಹಿತ ಆರೋಪ ಮಾಡಿದ್ದಾರೆ ಅಂತಾ ಸೆಂಥಿಲ್ ಹೇಳಿದ್ದಾರೆ. ಸೆಂಥಿಲ್ ಮತ್ತೊಮ್ಮೆ ಸುಳ್ಳು ಹೇಳಿದ್ದಾರೆ. ನನ್ನ ಮೇಲೆ ಸಿಬಿಐ ಪ್ರಕರಣ ಆದಾಗ ಸಸಿಕಾಂತ್ ಸೆಂಥಿಲ್ ಎಂಬವನು ಬಳ್ಳಾರಿಯಲ್ಲಿ ಎಸಿ ಆಗಿ ಕೆಲಸ ಮಾಡಿರಲೇ ಇಲ್ಲ. ನಾನು ಬಂಧನ ಆದ ಬಳಿಕ ಸೆಂಥಿಲ್ ಅಲ್ಲಿ ಕರ್ತವ್ಯಕ್ಕೆ ಜಾಯಿನ್ ಆಗಿದ್ದು, ನನ್ನ ಪ್ರಕರಣಕ್ಕೂ ಅವನಿಗೂ ಸಂಬಂಧ ಇಲ್ಲ ಎಂದರು.