ಬೆಂಗಳೂರು ಉತ್ತರ: ಬಿಜೆಪಿ ಅವ್ರು ಕೇಂದ್ರ ಮಾಡಿದ ಸಾಲಕ್ಕೆ ಲೆಕ್ಕ ಕೊಡಲಿ: ನಗರದಲ್ಲಿ ಶಾಸಕ ರವಿ ಗಣಿಗ ಕಿಡಿ
ಸಿಎಜಿ ವರದಿ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 4:30 ರ ಸುಮಾರಿಗೆ ವಿಧಾನಸೌಧದಲ್ಲಿ ಶಾಸಕ ರವಿಕುಮಾರ್ ಗಣಿಗ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಸಿಎಜಿ ವರದಿ ಹೇಳಿದೆ 138 ಲಕ್ಷ ಕೋಟಿಯನ್ನು ಮೋದಿ ಸರಕಾರ ಸಾಲ ಮಾಡಿದೆ. ಇದಕ್ಕೆ ಲೆಕ್ಕ ಕೊಡೊದು ಯಾರು..? ನಾವೇನು ಸಾಲ ಮಾಡಿ ನುಂಗಿಲ್ಲ, ಕಕ್ಕಿಲ್ಲ. ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಕೊಟ್ಟಿದ್ದೇವೆ. ಜನರಿಗೆ ಹಣ ಹೋಗಿದೆ, ರಾಮ ರಾಜ್ಯವಾಗಿದೆ. ಕೇಂದ್ರ ಮಾಡಿದ ಸಾಲಕ್ಕೆ ಲೆಕ್ಕ ಕೊಡಲಿ. ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಲೆಕ್ಕ ಕೊಡಲಿ ಎಂದರು.