ಬೆಂಗಳೂರು ಉತ್ತರ: ಅಕ್ಟೋಬರ್‌ನಲ್ಲಿ ಡೆವಿಲ್ ಸಿನಿಮಾ ಬಿಡುಗಡೆ ಅನುಮಾನ? ದರ್ಶನ್ ಫ್ಯಾನ್ಸ್ ಗೆ ಹೀಗೊಂದು ಬೇಸರದ ಸುದ್ದಿ
ನಟ ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಇತ್ತ 'ಡೆವಿಲ್' ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಚಿತ್ರದ ಕೆಲಸಗಳಿಗೆ ಯಾವುದೇ ತೊಂದರೆ ಆಗಬಾರದು ಎಂದು ದರ್ಶನ್ ಹೇಳಿದ್ದಾರೆ. ಅವರು ಜೈಲಿನಿಂದ ಬಿಡುಗಡೆ ಆಗುವ ಮುನ್ನ 'ಡೆವಿಲ್' ಸಿನಿಮಾ ತೆರೆಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಈ ಹಿಂದೆ 'ಸಾರಥಿ' ಚಿತ್ರದ ವಿಚಾರದಲ್ಲಿ ಇದೇ ನಡೆದಿತ್ತು. ಪ್ರಕಾಶ್ ನಿರ್ಮಿಸಿ ನಿರ್ದೇಶಿಸಿರುವ 'ಡೆವಿಲ್' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿಲ್ಲ. ಆದರೆ ಅಕ್ಟೋಬರ್ ಕೊನೆ ವಾರದಲ್ಲಿ ಸಿನಿಮಾ ತೆರೆಗೆ ಬರಬಹುದು ಎಂದು ಭಾವಿಸಲಾಗಿತ್ತು. ಚಿತ್ರತಂಡದಲ್ಲಿ ಕೆಲಸ ಮಾಡಿರುವ ಕೆಲವರು ಇದೇ ಮಾತು ಹೇಳುತ್ತಿದ್ದಾರೆ. ಆದರೆ ಇದೀಗ ಚಿತ್ರತಂಡ ಹೊಸ ಬಿಡುಗಡೆ ದಿನಾಂಕದ ಮೇಲೆ ಕಣ್ಣಿಟ್ಟಿದೆ ಎನ್ನುವ ಊಹಾಪೋಹ ಶುರುವಾಗಿದೆ.