ಬೆಂಗಳೂರು ಉತ್ತರ: ಸಾಧನಾ ಸಮಾವೇಶಕ್ಕೆ ಜನರ ತೆರಿಗೆ ಹಣ ಖರ್ಚು: ನಗರದಲ್ಲಿ ಸರ್ಕಾರದ ವಿರುದ್ಧ ಎಂಎಲ್‌ಸಿ ಸಿ.ಟಿ ರವಿ ವಾಗ್ದಾಳಿ
ವಿಜಯನಗರ ಸಾಧನಾ ಸಮಾವೇಶಕ್ಕೆ ಜನರ ತೆರಿಗೆಯ 10 ಕೋಟಿ ಖರ್ಚು ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ವಿರುದ್ದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಧನೆ ಸೊನ್ನೆ, ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾತ್ರೆ ಮಾಡುತ್ತಿದೆ. ನಾವು ಖಜಾನೆಗೆ ಮಾಲೀಕರಲ್ಲ, ನಾವು ಖಜಾನೆಯ ಟ್ರಸ್ಟಿ. ಒಂದೊಂದೂ ರೂಪಾಯಿಯನ್ನೂ ಜನರ ಹಿತಕ್ಕೆ ಬಳಸಬೇಕು. ಆದರೆ ಈ ಸರ್ಕಾರ ಸಾಧನೆ ಮಾಡದೇ ಜನರ ಹಣ ಪೋಲು ಮಾಡಿದೆ. ಇದನ್ನು ನಾವು ಖಂಡಿಸ್ತೇವೆ, ವಿಜಯನಗರ ಸಮಾವೇಶ ನಿಮ್ಮ ಪಕ್ಷದ ಸಮಾವೇಶ, ಅದನ್ನ ನಿಮ್ಮ ಪಕ್ಷದ ಹಣದಲ್ಲಿ ಮಾಡಿ, ಸರ್ಕಾರದ ಹಣ ಏಕೆ, ಜನರ ಹಣ ಏಕೆ? ಎಂದು ಕಿಡಿಕಾರಿದರು.