ಸಿದ್ಧಾಪುರ: ಕಂಚಿಕೈ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಅಡಿಕೆ, ಬಾಳೆ ಗಿಡ ನಾಶ : ಶಾಸಕ ಭೀಮಣ್ಣ ನಾಯ್ಕ ಭೇಟಿ, ಪರಿಶೀಲನೆ
ಸಿದ್ದಾಪುರ : ಆಕಸ್ಮಕಿವಾಗಿ ಬಿದ್ದ ಬೆಂಕಿಗೆ ಸುಮಾರು 400 ಕ್ಕೂ ಹೆಚ್ಚಿನ ಅಡಿಕೆ ಮತ್ತು ಬಾಳೆ ಗಿಡಗಳು ಸುಟ್ಟು ಹೋಗಿರುವ ಘಟನೆ ಸಿದ್ದಾಪುರ ತಾಲೂಕಿನ ಕಂಚಿಕೈ ಗ್ರಾಮದಲ್ಲಿ ನಡೆದಿದೆ. ಗಣಪತಿ ಹೆಗಡೆ ಕಂಚಿಕೈ ಇವರಿಗೆ ಸೇರಿದ ಬಾಳೆ ಹಾಗು ಅಡಿಕೆ ಸಸಿಗಳು ಸುಟ್ಟು ಲಕ್ಷಾಂತರ ರೂ ಹಾನಿ ಸಂಭವಿಸಿದ್ದು, ಮಂಗಳವಾರ ಸಾಯಂಕಾಲ ಶಾಸಕ ಬೀಮಣ್ಣ ಟಿ ನಾಯ್ಕ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಅಗತ್ಯ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಜಾಗದ ಮಾಲೀಕರು, ಸ್ಥಳೀಯ ಮುಖಂಡರು ಇದ್ದರು.