ಸಿದ್ಧಾಪುರ: ಕೋಲಸಿರ್ಸಿಯಲ್ಲಿ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯ ಬಂಧನ : 45 ಕೆಜಿ ಅಡಿಕೆ ವಶಕ್ಕೆ
ಸಿದ್ದಾಪುರ : ಸಿದ್ದಾಪುರ ತಾಲೂಕಿನ ಕೊಲಸಿರ್ಸಿ ಗ್ರಾಮದ ಮಾರುತಿ ನಗರದಲ್ಲಿ ನಾಗರಾಜ ಗೌಡ ಮನೆಯಿಂದ ಸುಮಾರು 45 ಕೆಜಿ ಅಡಿಕೆ ಕಳ್ಳತನ ಮಾಡಿದ ಅರೋಪಿ ಕೊಲಸಿರ್ಸಿ ಗುಡ್ಡೆಕೇರಿಯ ಕಾಶಿನಾಥ ಕೃಷ್ಣ ನಾಯ್ಕ ಎಂಬಾತನನ್ನು ಪೋಲಿಸರು ಕದ್ದ ಅಡಿಕೆ ಸಮೇತವಾಗಿ ಬಂಧಿಸುವಲ್ಲಿ ಶನಿವಾರ ಯಶಸ್ವಿಯಾಗಿದ್ದಾರೆ. ಎಸ್ಪಿ ನಾರಾಯಣ ಎಂ ಮಾರ್ಗದರ್ಶನ ಡಿವಾಯಸ್ಪಿ ಗಣೇಶ ಕೆ ಎಲ್ ಮತ್ತು ಸಿಪಿಐ ಜೆ ಬಿ ಸೀತಾರಾಮ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಆಯ್ ಗಳಾದ ಅನಿಲ ಬಿ.ಎಂ,ಗೀತಾ ಸಿರ್ಸಿಕರ್ ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇನ್ನು ಕಳೆದ ಮೂರು ದಿನಗಳ ಹಿಂದೆ ಮನೆಯಂಗಳದಲ್ಲಿ ಇದ್ದಂತಹ ಅಡಿಕೆಯನ್ನು ಕಳ್ಳತನ ಮಾಡಲಾಗಿತ್ತು. ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.