ಸಿದ್ಧಾಪುರ: ಬೇಡ್ಕಣಿ ಸೇರಿದಂತೆ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ ಭೂಮಿಪೂಜೆ
ಸಿದ್ದಾಪುರ : ಸಿದ್ದಾಪುರ ತಾಲೂಕಿನ ಬೇಡ್ಕಣಿ ಗ್ರಾಮ ಪಂಚಾಯತ ಸೇರಿದಂತೆ ವಿವಿಧ ಕಡೆಗಳಲ್ಲಿ ಶಾಸಕ ಭೀಮಣ್ಣ ನಾಯ್ಕ ಕೋಟ್ಯಾಂತರ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿದರು. ಬೇಡ್ಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50 ಲಕ್ಷ ರೂ. ವೆಚ್ಚದ ಶನೇಶ್ವರ ದೇವಸ್ಥಾನದ ಎದುರಿನ ರಸ್ತೆ, 20 ಲಕ್ಷ ರೂ. ವೆಚ್ಚದ ಗುಂಜಗೋಡು ರಸ್ತೆ, 20 ಲಕ್ಷ ರೂ. ವೆಚ್ಚದ ಕಡಕೇರಿ ಈಶ್ವರ ದೇವಸ್ಥಾನದ ಹಿಂಬದಿ ರಸ್ತೆ, ಹಾರ್ಸಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 15 ಲಕ್ಷ ರೂ. ವೆಚ್ಚದ ವಾಜಗದ್ದೆ-ಮತ್ತಿಗಾರ ರಸ್ತೆ, 20 ಲಕ್ಷ ರೂ ವೆಚ್ಚದ ಭಂಡಾರಕೇರಿ-ಕಲ್ಮನೆ ರಸ್ತೆ, 12 ಲಕ್ಷ ರೂ. ವೆಚ್ಚದ ಕೊಡ್ಸರ ಸ.ಹಿ.ಪ್ರಾ ಶಾಲೆ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ಮಾಡಿದರು.