ಹೊನ್ನಾವರ :- ಅರಣ್ಯ ಇಲಾಖೆಯ ಮೇಲಧಿಕಾರಿ ಯ ಕಿರುಕುಳ ತಾಳಲಾರದೆ ಗುತ್ತಿಗೆ ನೌಕರ ಹಾಗೂ ಆತನ ಪತ್ನಿ ಆತ್ಮಹತ್ಯೆಯ ಪತ್ರ ಬರೆದಿಟ್ಟು ಕಾಣೆಯಾದ ಘಟನೆ ನಡೆದಿದೆ.ಮಂಜುನಾಥ್ ನಾಯ್ಕ ಹಾಗೂ ಆತನ ಪತ್ನಿ ವೀಣಾ ಪೂಜಾರಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ ದಂಪತಿಯಾಗಿದ್ದಾರೆ ಮಂಜುನಾಥ್ ನಾಯ್ಕ ಹೊನ್ನಾವರದ ಗೇರುಸೊಪ್ಪ ಅರಣ್ಯ ವಿಭಾಗದಲ್ಲಿ 2014 ರಲ್ಲಿ ಗುತ್ತಿಗೆ ಆಧಾರದಲ್ಲಿ ಗೇರುಸೊಪ್ಪ ವಿಭಾಗಕ್ಕೆ ಅರಣ್ಯ ಇಲಾಖೆಯ ವಾಹನ ಚಾಲಕನಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತಿದ್ದನು