ಸಿದ್ಧಾಪುರ: ಕುಮಟಾದಲ್ಲಿ ಪತ್ರಕರ್ತರ ಮೇಲಿನ ಪ್ರಕರಣ ರದ್ಧತಿಗೆ ಪಟ್ಟಣದ ಪೊಲೀಸ್ ಠಾಣೆಗೆ ಮಾಧ್ಯಮ ಪ್ರತಿನಿಧಿಗಳ ಸಂಘ ಮನವಿ
ಸಿದ್ದಾಪುರ: ಕುಮಟಾದ ಪತ್ರಕರ್ತ ಚರಣರಾಜ್ ನಾಯ್ಕರ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಪಡಿಸುವಂತೆ ಆಗ್ರಹಿಸಿ ಸಿದ್ದಾಪುರ ತಾಲೂಕಾ ಮಾಧ್ಯಮ ಪ್ರತಿನಿಧಿಗಳ ಸಂಘದ ಸದಸ್ಯರು ಹಾಗೂ ಪ್ರಮುಖರು ಬುಧವಾರ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು. ತಾಲೂಕಿನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ನಾವುಗಳು ಸಂವಿಧಾನಬದ್ಧವಾಗಿ ಹಾಗೂ ಪತ್ರಿಕಾ ಧರ್ಮದಂತೆ ಕಳೆದ ಹಲವು ವರ್ಷಗಳಿಂದ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿದ್ದೇವೆ. ಪತ್ರಕರ್ತರು ಯಾವುತ್ತೂ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದರಿಂದ ತಮ್ಮ ವೃತ್ತಿನಿಷ್ಠೆಯನ್ನು ಮತ್ತು ನಿಲುವನ್ನು ಸಾರ್ವಜನಿಕರ ಪರವಾಗಿ ವ್ಯಕ್ತಪಡಿಸುವುದು ಪತ್ರಿಕಾ ಧರ್ಮವಾಗಿದೆ ಎಂದರು.