ಮೊಳಕಾಲ್ಮುರು: ಕೊಂಡ್ಲಹಳ್ಳಿ ಗ್ರಾಮದಲ್ಲಿ ಅಕ್ಷರ ವಂಚಿತ ಅಲೆಮಾರಿ ಮಕ್ಕಳಿಗಿಲ್ಲ ಶಿಕ್ಷಣ #localissue
ಯಾವ ಮಗುವು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಶಿಕ್ಷಣ ಇಲಾಖೆಯ ನಿಯಮ ಈ ಅಲೆಮಾರಿ ಮಕ್ಕ ಳಿಗೆ ಪಾಲನೆ ಆಗದೆ, ಶಿಕ್ಷಣದಿಂದ ದೂರ ಉಳಿಯು ವಂತಾಗಿದೆ. ಕೊಂಡ್ಲಹಳ್ಳಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಕಳೆದ ಇಪ್ಪತ್ತೈದು ದಿನಗಳಿಂದಲೂ ವಾಸಿಸುತ್ತಿರುವ ಮಹಾರಾಷ್ಟ್ರ ಮೂಲದ ಅಲೆಮಾರಿಗಳ ಐದಾರು ಕುಟುಂಬ, ಇಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗುಳಿದು ಬದುಕುತ್ತಿದ್ದಾರೆ. ಮಹಾರಾಷ್ಟ್ರ ಮೂಲದ ನಾಗಪೂರ ಜಿಲ್ಲೆ ರಾಮ್ ಟೆಕ್ ತಾಲೂಕಿನ ಮನ್ಸಾರ್ ಗ್ರಾಮದ ಚಿತ್ತೋಡಿಯ (ಠಾಕೂರ್)ಸಮುದಾಯ. ಇವರದು ಊರೂರು ಅಲೆಯುತ್ತಾ ನಾಟಿ ಔಷಧ ನೀಡುವ ಬದುಕು.