ಜಮಖಂಡಿ: ಪಟ್ಟಣದಲ್ಲಿ ಮನೆ ಮಾಡಿದ ಆಶಾಢ ಏಕಾದಶಿ ಸಂಭ್ರಮ, ಎಲ್ಲರ ಗಮನ ಸೆಳೆದ ವಿಠ್ಠಲನ ಅಲಂಕಾರ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಆಷಾಢ ಏಕಾದಶಿ ಹಬ್ಬದ ಸಂಭ್ರಮ ಮನೆ ಮಾಡಿದೆ.ನಗರದ ಅಪ್ಪಾ ಸಾಹೇಬ್ ವಿಠ್ಠಲ ಮಂದಿರದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ನೆರವೇರಿಸಲಾಯಿತು.ಬೆಳಿಗ್ಗೆಯಿಂದಲೇ ಭಕ್ತರು ದೇವರ ದರ್ಶನಾಶೀರ್ವಾದ ಪಡೆದು ಪುಣೀತರಾದರು.ದೇವಸ್ಥಾನದಲ್ಲಿ ವಿಠ್ಠಲನಿಗೆ ವಿಶೇಷ ಪೂಜಾ ಕೈಕಂರ್ಯಗಳನ್ನ ನೆರವೇರಿಸಿ ಮಾಡಿದ ವಿಶೇಷ ಅಲಂಕಾರ ಎಲ್ಲರ ಗಮನ ಸೆಳೆಯಿತು.