ಸಿದ್ಧಾಪುರ: ಬೆಂಗಳೂರಿನಲ್ಲಿ ಕಾಲ್ತುಳಿತದಿಂದ ಮೃತಪಟ್ಟ ಪಟ್ಟಣದ ರವೀಂದ್ರನಗರದ ಮಹಿಳೆಯ ಕುಟುಂಬಕ್ಕೆ ಪರಿಹಾರದ ಆದೇಶ ಪತ್ರ ವಿತರಣೆ ಮಾಡಿದ ಜಿಲ್ಲಾಡಳಿತ
ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಆದ ಕಾಲ್ತುಳಿತದಿಂದ ಮೃತಪಟ್ಟ ಸಿದ್ದಾಪುರದ ರವೀಂದ್ರನಗರದ ಅಕ್ಷತಾ ಪೈ ಕುಟುಂಬಕ್ಕೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹಾಗೂ ಶಾಸಕ ಭೀಮಣ್ಣ ನಾಯ್ಕ ಅವರು ಸೋಮವಾರ ಮಧ್ಯಾಹ್ನ 1.15ಕ್ಕೆ ಪರಿಹಾರದ ಆದೇಶ ಪತ್ರ ವಿತರಣೆ ಮಾಡಿದರು. ಕಾಲ್ತುಳಿತದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರವನ್ನು ರಾಜ್ಯ ಸರಕಾರ ಘೋಷಣೆ ಮಾಡಿತ್ತು. ಈ ಹಿನ್ನೆಯಲ್ಲಿ ಪರಿಹಾರ ವಿತರಣೆ ಮಾಡಲಾಯಿತು. ಸಂದರ್ಭದಲ್ಲಿ ಮೃತ ಅಕ್ಷತಾ ಪೈ ಪತಿ ಆಶಯ ಅಂಬಳ್ಳಿ ಆದೇಶ ಪತ್ರ ಸ್ವೀಕಾರ ಮಾಡಿದರು. ಈ ವೇಳೆ ಮಾವ ರಂಜನ್ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.