ಸಿದ್ಧಾಪುರ: ಬೇಡ್ಕಣಿಯಲ್ಲಿ ಚಕ್ಕಡಿ ಗಾಡಿ ಓಡಿಸಿ ಗಮನ ಸೆಳೆದ ಶಾಸಕ ಭೀಮಣ್ಣ ನಾಯ್ಕ
ಸಿದ್ದಾಪುರ : ಕೈಯಲ್ಲಿ ಬಾರಕೊಲ್ ಹಿಡಿದು ಹೈಹೈ ಎನ್ನುತ್ತ ಚಕ್ಕಡಿ ಗಾಡಿ ಓಡಿಸುವ ಮೂಲಕ ಸರಳತೆಯ ತೋರಿ, ತಾನೊಬ್ಬ ಶಾಸಕನಾಗುವ ಮೊದಲು ಅಪ್ಪಟ ಕೃಷಿಕ ಎಂಬುವದನ್ನ ಶಾಸಕ ಭೀಮಣ್ಣ ಟಿ ನಾಯ್ಕ ಜನತೆಗೆ ತೋರಿಸಿಕೊಟ್ಟ ವಿಡಿಯೋ ವೈರಲ್ ಆಗಿದೆ. ಶಾಸಕ ಭೀಮಣ್ಣ ನಾಯ್ಕ್ ಈ ಹಿಂದೆ ಟ್ರಾಕ್ಟರ್ ಓಡಿಸುವ ಮೂಲಕ ನಾನೊಬ್ಬ ಶಾಸಕನಾಗುವ ಮೂದಲು ಕೃಷಿ ಭೂಮಿಯಲ್ಲಿ ಓಡಿಸುವ ಟ್ರಾಕ್ಟರ್ ಚಾಲಕ ಎಂಬುವದನ್ನು ತೋರಿಸಿಕೊಟ್ಟಿದ್ದರು.ಆದರೆ ಈಗ ರೈತರ ಅವಿಭಾಜ್ಯ ಅಂಗವಾಗಿರುವ ಚಕ್ಕಡಿ ಗಾಡಿಯನ್ನೇ ಓಡಿಸುವ ಮೂಲಕ ನಾನೊಬ್ಬ ಶಾಸಕನಾಗುವ ಮೊದಲು ಅಪ್ಪಟ ಕೃಷಿಕನಾಗಿದ್ದೆ ಎಂಬುವದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.