ಸಿದ್ಧಾಪುರ: ಗಡಿಯಲ್ಲಿ ಯುದ್ದದ ಕಾರ್ಮೋಡ : ಹನಿಮೂನ್ ಬಿಟ್ಟು ಸೇನೆಯ ಸೇವೆಗೆ ತೆರಳಿದ ಸಿದ್ದಾಪುರದ ಯೋಧ
ಶಿರಸಿ : ಗಡಿಯಲ್ಲಿ ನಡೆಯುತ್ತಿರುವ ದಾಳಿ, ಆಪರೇಷನ್ ಸಿಂದೂರ ಕಾರ್ಯಾಚರಣೆಯ ಹಿನ್ನಲೆಯಲ್ಲಿ ದೇಶದಾದ್ಯಂತ ಯೋಧರಿಗೆ ಸೇನೆಗೆ ಹಿಂತಿರುಗಲು ಕರೆ ಬಂದಿದೆ. ಇದರಿಂದ ಜಿಲ್ಲೆಯ ಸಿದ್ದಾಪುರದಲ್ಲಿ ದೇಶದ ಕರೆಗೆ ಹನಿಮೂನ್ ಕ್ಯಾನ್ಸಲ್ ಮಾಡಿ ಹೆಮ್ಮೆಯ ಯೋಧ ಸೇವೆಗೆ ತೆರಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹೊಸುರಿನ ಯೋಧ ಜೈವಂತ್ ವೆಂಕಟೇಶ್ ಹನಿಮೂನ್ ಕ್ಯಾನ್ಸಲ್ ಮಾಡಿ ದೇಶಸೇವೆಗೆ ಹೊರಟ ಯೋಧನಾಗಿದ್ದು,ಮದುವೆಯಾಗಿ 9 ದಿನಕ್ಕೆ ಪತ್ನಿಯನ್ನು ಬಿಟ್ಟು ದೇಶದ ಕರೆಗೆ ಯೋಧನ ಮನಸ್ಸು ಮಿಡಿದಿದೆ.