ಸಿದ್ಧಾಪುರ: ಆರ್.ಸಿ.ಬಿ. ಸಂಭ್ರಮಚಾರಣೆ ವೇಳೆಯ ಕಾಲ್ತುಳಿತದಲ್ಲಿ ಸಿದ್ದಾಪುರದ ಮಹಿಳೆ ಸಾವು : ಪಟ್ಟಣದಲ್ಲಿ ಅಂತ್ಯ ಸಂಸ್ಕಾರ
ಸಿದ್ದಾಪುರ : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾಲ್ತುಳಿತ ಘಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ 27 ವರ್ಷದ ಅಕ್ಷತಾ ಅವರು ದುರಂತ ಸಾವನ್ನಪ್ಪಿದ್ದಾರೆ. ಗುರವಾರ ಹುಟ್ಟೂರಿಗೆ ತಂದು ಅಕ್ಷತಾಳ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಮೂಲತಃ ಮಂಗಳೂರಿನ ಮೂಲ್ಕಿಯವರಾದ ಅಕ್ಷತಾ, ಓದಿನಲ್ಲಿ ಅತ್ಯಂತ ಪ್ರತಿಭಾವಂತರಾಗಿದ್ದರು. ಅವರು ಸಿ.ಎ. ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತೆಯಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಒಂದೂವರೆ ವರ್ಷದ ಹಿಂದೆ, ಅಕ್ಷತಾ ಅವರು ಸಿದ್ದಾಪುರ ಪಟ್ಟಣದ ಇಂಜಿನಿಯರ್ ಆಶಯ್ ಅವರನ್ನು ವಿವಾಹವಾಗಿದ್ದರು.