ಸಿದ್ಧಾಪುರ: ಬೆಂಗಳೂರಿನಲ್ಲಿ ಶಾಸಕ ಭೀಮಣ್ಣರಿಂದ ಇಂಧನ ಸಚಿವರ ಭೇಟಿ : ಸಿದ್ದಾಪುರ ಪಟ್ಟಣಕ್ಕೆ ಕುಡಿಯುವ ನೀರಿನ ಕುರಿತು ಚರ್ಚೆ
ಶಿರಸಿ : ಶಿರಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಗುರವಾರ ಬೆಂಗಳೂರಿನಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಭೇಟಿ ಮಾಡಿ, ಕ್ಷೇತ್ರದ ಕುಡಿಯುನ ನೀರಿನ ಯೋಜನೆ ಕುರಿತು ಚರ್ಚಿಸಿದರು. ಸಾಗರದ ಅಂಬುಗಳಲೇ ಹತ್ತಿರದ ಶರಾವತಿ ನದಿ ಮೂಲದಿಂದ ಸಿದ್ದಾಪುರ ತಾಲೂಕಿಗೆ ನೀರು ತರಲು ಯೋಜನೆ ರೂಪಿಸಬೇಕು ಎಂದು ಶಾಸಕರು ಮನವಿ ನೀಡಿದರು. ಸಿದ್ದಾಪುರ ಪಟ್ಟಣಕ್ಕೆ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಎರಡನೇ ಹಂತದ ನೀರು ಸರಬರಾಜುಗಾಗಿ ಯೋಜನೆ ರೂಪಿಸಲು ಕರ್ನಾಟಕ ವಿದ್ಯುತ್ ನಿಗಮಕ್ಕೆ ಜಿಲ್ಲಾದಿಕಾರಿಗಳು ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.