ಉಡುಪಿ: ಪ್ರದೀಪ್ ಪೂಜಾರಿ ಸಾವು ಪ್ರಕರಣ - ನವೆಂಬರ್ 11ರಂದು ಬೃಹತ್ ಹೋರಾಟ
Udupi, Udupi | Nov 8, 2026 ಉಡುಪಿಯ ಪ್ರದೀಪ್ ಪೂಜಾರಿ ಅವರ ಸಂಶಯಾಸ್ಪದ ಸಾವು ಪ್ರಕರಣದಲ್ಲಿ ಸಮರ್ಪಕ ತನಿಖೆಯಾಗಬೇಕೆಂದು ಹಿಂದೂಪರ ಸಂಘಟನೆಯ ಮುಖಂಡ ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದ್ದಾರೆ. ತನಿಖೆಯಲ್ಲಿ ಪ್ರಗತಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ನ್ಯಾಯಕ್ಕಾಗಿ ನವೆಂಬರ್ 11ರಂದು ಉಡುಪಿಯಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.