ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಸಡಗರದಿಂದ ಜರುಗಿದ ಸ್ವಾತಂತ್ರ್ಯ ದಿನಾಚರಣೆ: ವೀರಯೋಧರಿಂದ ಧ್ವಜಾರೋಹಣ
ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆಯ ಆವರಣದಲ್ಲಿ ದೇಶದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸೌಹಾರ್ದತೆ ಮತ್ತು ದೇಶಭಕ್ತಿಯೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ಮಠಪತಿ ಅವರು ವಹಿಸಿದ್ದರು. ದೇಶದ ಮಹನೀಯರ ಭಾವಚಿತ್ರಕ್ಕೆ ಮುಖಂಡರಾದ ಅಸ್ಲಾಂ ಮುಲ್ಲಾ ಹಾಗೂ ಸಿದರಾಯ ತೋಡಕರ ಅವರು ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.
ವೀರಯೋಧರಿಂದ ಧ್ವಜಾರೋಹಣ:
ಭಾರತೀಯ ಸೇನೆಯ ಹೆಮ್ಮೆಯ ವೀರಯೋಧರಾದ ರೋಹನ ಪವಾರ ಹಾಗೂ ಸಹದೇವ ಜಾದವ ಅವರು ಜಂಟಿಯಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಾಮಾಜಿಕ ಹೋರಾಟಗಾರರಾದ ಪ್ರವೀಣ ನಾಯಿಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗಣ್ಯರು ಹಾಗೂ ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ದೇಶ ಕಾಯುವ ವೀರಯೋಧರಾದ ರೋಹನ ಪವಾರ ಮತ್ತು ಸಹದೇವ ಜಾದವ, ಎಸ್.ಜಿ.ಎಸ್. ಪಿಯು ಕಾಲೇಜಿನ ಉಪಪ್ರಾಚಾರ್ಯ ಹುದ್ದೆಯಿಂದ ನಿವೃತ್ತಿ ಹೊಂದಿರುವ ಪಿ.ಎಂ. ಬಡಿಗೇರ ಹಾಗೂ ಸಂಸ್ಥೆಯ ಭದ್ರತಾ ವ್ಯವಸ್ಥೆಯ ಮುಖಂಡರಾದ ಯಾಸೀನ ನದಾಪ, ಅಶೋಕ ಬಡಿಗೇರ, ರೋಹಿದಾಸ ಭಂಡಾರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಮೇಶ ಪಾಟೀಲ, ಧನ್ವಂತರಿ ಲೋಕಸಿರಿ ಆಸ್ಪತ್ರೆಯ ವೈದ್ಯರಾದ ಮಹಾದೇವ ನಾಯಿಕ, ಭೀಮಗೌಡಾ ನಾಯಿಕ, ಸಂತೋಷ ನಾಯಿಕ, ಪರಗೊಂಡ ಮುಧೋಳ, ವಿಶ್ವನಾಥ ಭಂಡಾರೆ, ಅಪ್ಪಾಸಾಹೇಬ ಚೌಗಲಾ, ಸಿದರಾಯ ಭಂಡಾರೆ, ಹೊನ್ನಪ್ಪಾ ಪೂಜಾರಿ, ಸಿದ್ದು ಪಾಟೀಲ, ರಾವಸಾಬ ಮುಧೋಳ, ವಿಠಲ ಶಿಂದೆ, ನಾಯ್ಕುಬಾ ಶಿಂಧೆ, ಬಾಬಾಸಾಬ ಅಬ್ಯಂಕರ ಸೇರಿದಂತೆ ಶಿಕ್ಷಕ ವೃಂದದವರಾದ ವಿ.ಆರ್. ತಕತರಾವ, ಬಿ.ಆರ್. ಪಾಟೀಲ, ಸಚಿನ ಕಾಂಬಳೆ, ಪ್ರೇಮಕುಮಾರ ನಾಯಿಕ, ಆದಿತ್ಯ ನಾಯಿಕ, ನಾರಾಯಣ ಭಾಮನೆ, ಉದಯ ಅವಳೆ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
— ವರದಿ: ಮಹೇಶ್ ಶರ್ಮಾ
Yadgir, Yadgir | Aug 15, 2026