ಹಾಸನ: ಪ್ರತಿಯೊಬ್ಬರ ಸಾದನೆ ಹಿಂದೆ ತಂದೆ, ತಾಯಿ ಶ್ರಮ ಅಪಾರ: ನಗರದಲ್ಲಿ ಪೋಲಿಸ್ ಕಮಿಷನರ್ ಯಡಮಾರ್ಟೀನ್
Hassan, Hassan | Jul 5, 2025 ಹಾಸನ: ನೀವು ಲೈಫ್ ನಲ್ಲಿ ಏನೆ ಯಶಸ್ಸು ಕಂಡಿದ್ದರೂ ಅದು ನೂರಕ್ಕೆ ತೊಂಬತ್ತು ಭಾಗ ನಿಮ್ಮ ತಂದೆ ತಾಯಿಯೆ ಕಾರಣ ವರತು ಎಲ್ಲಾವು ನನ್ನಿಂದಲೇ ಅಂದುಕೊಳ್ಳಬಾರದು ಎಂದು ಪೊಲೀಸ್ ಕಮಿಷನರ್ ಬೆಂಗಳೂರಿನ ಯಡಾ ಮಾರ್ಟಿನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು..ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ವಿಶ್ವ ಪೌಂಡೇಶನ್ ಮತ್ತು ಆಸ್ಟ್ರೇಲಿಯನ್ ವಿಸಾ ಮೈಗ್ರೇಸನ್ ಕನ್ಸಲ್ಟನ್ಸಿ ಸರ್ವೀಸ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಹಮ್ಮಿಕೊಳ್ಳ ಲಾಗಿದ್ದ ಅತ್ಯುತ್ತಮ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಾಗೂ ಬೀಳ್ಕೊಡಿಗೆ ಸಮಾರಂಭದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ವಿದೇಶದಲ್ಲಿ ಹೊಸ ಶೈಕ್ಷಣಿಕ ಪ್ರಯಾಣ ಕೈಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಕೋರಿ ಮಾತನಾಡಿದರು.