ಕನಕಪುರ: ಹೊಸದುರ್ಗ ಶಾಲೆಗೆ ಸಿಕ್ಕಿತು ಹೊಸ ಶಾಲಾ ವಾಹನ
ಕನಕಪುರ ತಾಲೂಕಿನ ಹೊಸದುರ್ಗ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ಗೋಕಲ್ದಾಸ್ ಎಕ್ಸ್ಪೋರ್ಟ್ಸ್ ಫೌಂಡೇಶನ್ ನೂತನ ಶಾಲಾ ವಾಹನವನ್ನು ಹಸ್ತಾಂತರಿಸಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳನ್ನೂ ವಿತರಿಸಲಾಯಿತು.