ಸಿದ್ಧಾಪುರ: ಹದಿನಾರನೇ ಮೈಲಿಗಲ್ಲು ಬಳಿ ತಡೆಗೋಡೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಶಂಕುಸ್ಥಾಪನೆ
ಸಿದ್ದಾಪುರ : ಶಾಸಕ ಭೀಮಣ್ಣ ನಾಯ್ಕ ಅವರು ಸಿದ್ದಾಪುರ ತಾಲೂಕಿನ ಬಾಳೂರು ಮುಠ್ಠಳ್ಳಿಯ ಹದಿನಾರಾನೇ ಮೈಲಿಗಲ್ಲು ರಸ್ತೆ ಮಳೆಯಿಂದಾಗಿ ಕೊರೆದು ಹೋದ ಭಾಗಕ್ಕೆ ತಡೆಗೋಡೆ ಹಾಗೂ ಸಿ ಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಮಂಗಳವಾರ ಸಾಯಂಕಾಲ 6.30 ಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿ, ಈ ಕಾಮಗಾರಿಯು ಗ್ರಾಮೀಣ ಪ್ರದೇಶದ ಮೂಲಸೌಕರ್ಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. ಈ ವೇಳೆ ಸ್ಥಳೀಯ ಮುಖಂಡರು, ಅಧಿಕಾರಿಗಳು ಇದ್ದರು.