ಕೋಲಾರ: ನಗರದ ಯೋಧರ ಸ್ಮಾರಕದ ಬಳಿ ದೇಶದ ವಿವಿಧೆಡೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ
Kolar, Kolar | Jul 6, 2025 ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ದೇಶಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮ ರಾದ ಭಾರತೀಯ ವಾಯು ಸೇನೆಯ ವಿಜೇಂದ್ರ ಯಾದವ ಶಾಮ್ ಶೇರ್ ಸಿಂಗ್ ,ಸಂಜಯ್,ಬಲಜಿಂದರ ಸಿಂಗ್ ಭಾವಚಿತಕ್ಕೆ,ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ ಭಾನುವಾರ ದೀಪ ಬೆಳಗಿಸಿ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಮುರಳಿ ಗೌಡ ರವರು ಮಾದ್ಯಮಗಳಿಗೆ ಪ್ರತಿಕ್ರಯಿಸಿ,ಯೋಧರೆಂದರೆ ದೇಶದ ನಿಜವಾದ ನಾಯಕರು ಯೋಧರು ಗಡಿ ಕಾಯುವ ಕೆಲಮಾಡದಿದ್ದರೆ ನಾವು ನಮ್ಮವರೊಂದಿಗೆ ಸಂತೋಷದಿಂದಿರಲು ಸಾದ್ಯವೇ ಇಲ್ಲ.ತಮ್ಮ ಸುಖ ,ಶಾಂತಿ,ನೆಮ್ಮದಿ ಯನ್ನು ಬದಿಗಿಟ್ಟು ದೇಶವನ್ನು ಕಾಯಲು ಹಗಲಿರುಳು ದುಡಿಯುತ್ತಾರೆ ಎಂದ್ರು