ಬೆಂಗಳೂರು ಉತ್ತರ: ಗಣೇಶ ಹಬ್ಬಕ್ಕೆ ರಸ್ತೆ ಬಂದ್ ಮಾಡೋರಿಗೆ ಅನುಮತಿ ಕಡ್ಡಾಯ: ನಗರದಲ್ಲಿ ರಾಮಲಿಂಗಾರೆಡ್ಡಿ
ಗಣೇಶ ಹಬ್ಬಕ್ಕೆ ನಿಯಮ ರುಪಿಸಿರೋ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಗೌರಿ ಗಣೇಶ ಹಬ್ಬ ಅಂದ್ರೆ ಸಹಜವಾಗಿ ಮಕ್ಕಳಿಗೆ ಖುಷಿ. ಎಲ್ಲಾ ಗಲ್ಲಿಗಳಲ್ಲಿ ಗಣೇಶ ಹಬ್ಬ ಮಾಡ್ತಾರೆ. ಸಣ್ಣ ಗಣೇಶ ಕೂರಿಸೋರಿಗೆ ಅನುಮತಿ ಅವಶ್ಯಕತೆ ಇಲ್ಲ. ರಸ್ತೆ ಬಂದ್ ಮಾಡೋರಿಗೆ ಅನುಮತಿ ಅವಶ್ಯಕತೆ ಇದೆ. 70 ಆನ್ ಲೈನ್ ಪೋರ್ಟ್ ತೆರೆಯಲಾಗಿದೆ. ಮೊದಲು ಕಾರ್ಪೊರೇಷನ್‌ಗೆ ಹೋಗಿ ಅನುಮತಿ ಪಡೆಯಬೇಕಿತ್ತು. ಈಗ ಆನ್ ಲೈನ್ ಮೂಲಕ ಪಡೆಯಬಹುದು ಎಂದರು.