ಬೆಂಗಳೂರು ಉತ್ತರ: ಸ್ಕೂಟಿಗೆ ಡಿಕ್ಕಿ ಹೊಡೆದ BMTC ಬಸ್, ಅಮ್ಮನ ಜತೆ ಶಾಲೆಗೆ ಹೊರಟಿದ್ದ 10 ವರ್ಷದ ಬಾಲಕಿ..! ಯಲಹಂಕದಲ್ಲಿ ಘಟನೆ; VIDEO ನೋಡಿ..
ಆಗಸ್ಟ್ 21 ಬೆಳಿಗ್ಗೆ 8:15ರ ಸುಮಾರಿಗೆ ಯಲಹಂಕದ ಕೋಗಿಲೆ ಕ್ರಾಸ್ ಬಳಿ ಬಿಎಂಟಿಸಿ ಸ್ಕೂಟಿಗೆ ಗುದ್ದಿದೆ. ತಾಯಿ ಇಬ್ಬರು ಮಕ್ಕಳೊಂದಿಗೆ ಸ್ಕೂಟಿಯಲ್ಲಿ ಹೋಗ್ತಾ ಇರುತ್ತಾರೆ ಎಡಗಡೆಯಿಂದ ಬಂದಂತಹ ಸ್ಕೂಟಿಗೆ ಬಿಎಂಟಿಸಿ ಗುದ್ದಿದೆ. ಸದ್ಯ ಒಂದು ಮಗು ಸಾವನ್ನಪ್ಪಿದ್ದು ಇನ್ನೊಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಬಿಎಂಟಿಸಿ ಚಾಲಕ ಬಸ್ ನಿಲ್ಲಿಸಿದ್ರೆ ಮಗು ಬಚಾವಾಗುವ ಸಾಧ್ಯತೆ ಇತ್ತು ಆದರೆ ಚಾಲಕ ಬಸ್ ನಿಲ್ಲಿಸದೆ ಸ್ಪೀಡ್ ಆಗಿ ಹೋದಂತಹ ಕಾರಣ ಮಗು ಸ್ಥಳದಲ್ಲೇ ಸಾವನಪ್ಪಿದೆ.