ಬೆಂಗಳೂರು ಉತ್ತರ: ಪಿಓಪಿ ಕರಗುವುದಿಲ್ಲ ನೀರಿನಲ್ಲಿರುವ ಜಲಚರಗಳು ಸಾಯುತ್ತವೆ: ನಗರದಲ್ಲಿ ಈಶ್ವರ್ ಖಂಡ್ರೆ
ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ವಿಕಾಸಸೌಧದಲ್ಲಿ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಮನೆ ಮನೆಯಲ್ಲಿ, ಬೀದಿ ಬೀದಿಯಲ್ಲಿ ಗಣೇಶ್ ಹಬ್ಬ ಆಚರಣೆ ಮಾಡ್ತಾ ಬಂದಿದ್ದೇವೆ. ಹವಾಮಾನ ವೈಪರೀತ್ಯಗಳಿಂದ ಸಂಕಷ್ಟ ಎದುರಾಗುತ್ತದೆ. ಮಳೆ ಬರುವ ಸಮಯಕ್ಕೆ ಬರಲ್ಲ. ಇತ್ತೀಚೆಗೆ ಗುಡ್ಡ ಕುಸಿತ ಆಗಿದೆ. ತಾಪಮಾನ ಹೆಚ್ಚಾಗುತ್ತಿದೆ, ಕಾಯ್ದೆ ಕಾನೂನುಗಳು ಇದ್ದಾವೆ. ಜನರಲ್ಲಿ ಜಾಗೃತಿ ಮೂಡಿಸಬೇಕು. ಕಳೆದ ವರ್ಷವೂ ನಾನು, ಸಿಎಸ್ ಜೂಮ್ ಮೀಟಿಂಗ್ ಮಾಡಿ ಮಾರ್ಗಸೂಚಿ ಕೊಡ್ತಾ ಬಂದಿದ್ದೇವೆ. POP ಯಿಂದ ಗಣೇಶ್ ಮೂರ್ತಿ ತಯಾರು ಮಾಡ್ತಾರೆ. ನಮ್ಮ ಹಿರಿಯರು ಮಣ್ಣಿನಿಂದ ಗಣೇಶ್ ತಯಾರಿ ಮಾಡುತ್ತಿದ್ದರು. POP ಕರಗುವುದಿಲ್ಲ, ಇದರಿಂದ ನೀರಿನಲ್ಲಿರುವ ಜಲಚರಗಳು ಸಾಯುತ್ತವೆ ಎಂದರು.