ಬೆಂಗಳೂರು ಉತ್ತರ: ಗೌರಿ-ಗಣೇಶ ಹಬ್ಬ ಈದ್ ಮಿಲಾದ್ ಹಿನ್ನೆಲೆ, ಬೆಂಗಳೂರು ಪೊಲೀಸರಿಂದ ಶಾಂತಿ ಸಭೆ
ಗೌರಿ - ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಎರಡೂ ಧರ್ಮೀಯರೊಂದಿಗೆ ಸರಣಿ ಶಾಂತಿ ಸಭೆಗಳನ್ನ ನಡೆಸಿದ್ದಾರೆ.ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಂತಿ ಸಭೆ ನಡೆಸಿ ನಿಯಮಗಳ ಪಾಲನೆ, ಕೋಮು ಸೌಹಾರ್ದತೆ ಕಾಪಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ 21ರಂದು ಮಧ್ಯಾಹ್ನ 12:30ಕ್ಕೆ ವಸಂತನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, "ಉತ್ಸವಗಳು, ಮೆರವಣಿಗೆಗಳಿಗೆ ನಿಗದಿತ ರಸ್ತೆಗಳಲ್ಲಿ ಮಾತ್ರ ನಡೆಯಬೇಕು.ಡಿ.ಜೆ ಬಳಕೆ, ಅನುಮತಿ ಬಗ್ಗೆ ಸಭೆ ನಡೆಸಲಿದ್ದೇವೆ ಹಾಗೂ ಸೋಷಿಯಲ್ ಮೀಡಿಯಾಗಳ ಮೂಲಕ ಪ್ರಚೋದನೆ ನೀಡುವವರ ಬಗ್ಗೆ ನಿಗಾ ಇಡಲಾಗಿದೆ" ಎಂದು ತಿಳಿಸಿದರು.