ಬೆಂಗಳೂರು ಉತ್ತರ: ಯಲಹಂಕ ಅಪಘಾತ ಪ್ರಕರಣ; ಬರ್ತ್ ಡೇ ಹಿಂದಿನ ದಿನವೇ
ತಾಯಿ ಮುಂದೆ ಪ್ರಾಣ ಬಿಟ್ಟ ತನ್ವಿ! ಅಜ್ಜಿ ಜತೆ ಜನ್ಮದಿನ ಆಚರಿಸ್ಬೇಕು ಅಂದಿದ್ಲು..
ಆಗಸ್ಟ್ 21 ರಂದು ಹತ್ತು ವರ್ಷದ ಬಾಲಕಿಗೆ ಬಿಎಂಟಿಸಿ ಗುದ್ದಿದ ಪ್ರಕರಣ ಒಂದೊಂದೇ ಕರುಣಾಜನಕ ಕಥೆಯನ್ನ ಹೊರ ತರುತ್ತಿದೆ. ನಾಳೆ 10 ವರ್ಷದ ಬಾಲಕಿ ತನ್ವಿ ಬರ್ತಡೇ ಇತ್ತು. ಆದರೆ ಹುಟ್ಟು ಹಬ್ಬದ ಮುನ್ನ ದಿನವೇ ತನ್ವಿ ಸಾವನ್ನಪ್ಪಿದ್ದಾಳೆ. ಅಜ್ಜಿ ಜೊತೆ ಗೌರಿಬಿದನೂರಿನಲ್ಲಿ ತನ್ನಿ ಬರ್ತಡೆ ಆಚರಣೆ ಮಾಡುವ ಕನಸು ಕಂಡಿದ್ಲು ಆದರೆ ಕನಸು ನನಸಾಗುವ ಮುನ್ನವೇ ತನ್ವಿ ಸಾವನಪ್ಪಿದ್ದಾಳೆ. ತಾಯಿಯ ಮುಂದೆ ತನ್ವಿ ಸಾವನ್ನಪ್ಪಿದ್ದು BMTC ವಿರುದ್ಧ ಜನಾಕ್ರೋಶ ವ್ಯಕ್ತ ಆಗಿದೆ.