ಹಡಗಲಿ: ಮುಸ್ಲಿಮರಿಲ್ಲದ ಬ್ಯಾಲಹುಣ್ಸಿ ಗ್ರಾಮದಲ್ಲಿ ಮೊಹರಂ ಆಚರಣೆ ನೆರವೇರಿಸುವ ಹಿಂದೂಗಳು
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿ ಮುಸ್ಲಿಮರಿಲ್ಲ. ಆದರೆ ಹಿಂದೂಗಳು ಮೊಹರಂ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡುತ್ತಿದ್ದಾರೆ. ವಂತಿಗೆ ಸಂಗ್ರಹಿಸಿ ಎಲ್ಲರೂ ಜೊತೆಗೂಡಿ ಮೊಹರಂ ಆಚರಣೆ ಮಾಡುತ್ತಾರೆ. ಗ್ರಾಮದ ಶಿರಹಟ್ಟಿ ಪಕ್ಕೀರಸ್ವಾಮಿ ದೇವಸ್ಥಾನದಲ್ಲಿ ಪೀರಲ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಸಮೀಪದ ಮಕರಬ್ಬಿ ಗ್ರಾಮದಿಂದ ಮುಜಾವರರನ್ನು ಆಹ್ವಾನಿಸಿ ಮೊಹರಂ ವಿಧಿ ವಿಧಾನ ನಡೆಸಲಾಗುತ್ತದೆ. ಶನಿವಾರ ಸಂಜೆ 4 ಗಂಟೆಗೆ ಗ್ರಾಮದ ಮುಖ್ಯ ಬೀದಿಯಲ್ಲಿ ಪೀರಲ ದೇವರ ಮೂರ್ತಿಗಳ ಮೆರವಣಿಗೆ ನಡೆಸಲಾಗಿದೆ.