ಶಿಕಾರಿಪುರ: ಪಟ್ಟಣದ ವಾರದಸಂತೆಯಲ್ಲಿ ಪುರಸಭೆಯಿಂದ ಮತದಾನ ಜಾಗೃತಿ
ಶಿಕಾರಿಪುರ ಪುರಸಭೆ ವತಿಯಿಂದ ಶನಿವಾರ ಮಾಧ್ಯಹ್ನ ಮತದಾನ ಜಾಗೃತಿ ಕಾರ್ಯಕ್ರಮ ಜರುಗಿತು. ಮೇ.7ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.100ರಷ್ಟು ಮತದಾನ ಮಾಡುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾನ ನಡೆದ ತಾಲ್ಲೂಕು ಎಂಬ ಹೆಗ್ಗಳಿಕೆ ಪಾತ್ರರಾಗಬೇಕು ಎಂದು ಮುಖ್ಯಾಧಿಕಾರಿ ಭರತ್ ಕರೆ ನೀಡಿದರು. ಈ ಸಂದರ್ಭದಲ್ಲಿ ಚುನಾವಣಾ 'ಚುನಾವಣೆ ಪರ್ವ- ದೇಶದ ಗರ್ವ', 'ನನ್ನ ಮತ ನನ್ನ ಹಕ್ಕು' ಎಂಬ ಘೋಷವಾಕ್ಯಗಳೊಂದಿಗೆ ಪುರಸಭೆಯ ಮತದಾನ ವಾಹನದಲ್ಲಿ ಅರಿವು ಮೂಡಿಸಲಾಯಿತು.