ಶಿರಸಿ: ಬಿದ್ರಳ್ಳಿಯ ಸಿಲಿಂಡರ್ ಸ್ಪೋಟದಿಂದ ಮನೆಯ ವಸ್ತುಗಳಿಗೆ ಹಾನಿ : ಅಂದಾಜು 13 ಲಕ್ಷ ನಷ್ಟ
ಶಿರಸಿ : ಸಿಲೆಂಡರ್ ಗೆ ತಾಗಿದ ಬೆಂಕಿಯಿಂದಾಗಿ ಸುಮಾರು 12 ರಿಂದ 13 ಲಕ್ಷ ರೂ ಹಾನಿಯುಂಟಾದ ಘಟನೆ ಶಿರಸಿ ತಾಲೂಕಿನ ಸುಗಾವಿಯ ಬಿದ್ರಳ್ಳಿಯಲ್ಲಿ ನಡೆದಿದೆ. ಸುಗಾವಿಯ ಬಿಬಿ ಆಯಿಷಾ ಅಬ್ದುಲ್ ಕರಿಂ ಸಾಬ್ ಇವರ ಮನೆಯಲ್ಲಿ ನಡೆದ ಘಟನೆ ನಡೆದಿದ್ದು, ಸಿಲಿಂಡರ್ ಸ್ಪೋಟದಿಂದಾಗಿ ದುರ್ಘಟನೆ ಜರುಗಿದೆ. ಬೆಂಕಿಗೆ 50 ಭತ್ತದ ಚೀಲಗಳು,ಫ್ರಿಡ್ಜ,ಒಲೆ,ವಾಷಿಂಗ್ ಮಷಿನ್,ಎರಡು ಮೊಬೈಲ್, ಮನೆ ಬಳಕೆ ವಸ್ತು ಸೇರಿದಂತೆ,ಸುಮಾರು 2 ಲಕ್ಷ ರೂ ಬೆಲೆಯವ25 ಗ್ರಾಂ ಬಂಗಾರದ ಆಭರಣ,1.5ಲಕ್ಷ ರೂ ಸಾಲದ ಹಣ ಬೆಂಕಿಯಲ್ಲಿ ಸುಟ್ಟು ಹೋಗಿದೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.