ಶಿರಸಿ: ಗ್ರಾಮೀಣ ಠಾಣೆ ಪೊಲೀಸರಿಂದ ಕೇರಳದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಶಿರಸಿ : ಪಾದಚಾರಿಗೆ ಡಿಕ್ಕಿ ಪಡಿಸಿ 30 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜಾರಾಗದೇ ಇದ್ದ ಆರೋಪಿಯನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಇಲಿಯಾಸ್ ಪೌಲ್ ಸಿ ಪಿ ಪೋಲೌಸ್ ಬಂಧಿತ ಆರೋಪಿ. ಆರೋಪಿಯು 13-03-1994 ರಂದು ಲಾರಿ ಚಲಾಯಿಸಿಕೊಂಡು ಹೋಗಿ ಕುಮಟಾ ರಸ್ತೆ ಕಸಗೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಮಂಜುಗುಣಿಯ ಲೀಲಾವತಿ ಗಣಪತಿ ಹೆಗಡೆ ಇವರಿಗೆ ಡಿಕ್ಕಿ ಪಡಿಸಿದ್ದು,ಬಳಿಕ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜಾರಾಗದೆ ತಲೆಮರೆಸಿಕೊಂಡಿದ್ದನು. ಘಟನೆಯಲ್ಲಿ ಗಾಯಾಳು ಮೃತಪಟ್ಟಿದ್ದರು.