ಶಿರಸಿ: ಯಡಳ್ಳಿ ಗ್ರಾ.ಪಂ ಪಿಡಿಒ ವಿರುದ್ಧ ನಗರದಲ್ಲಿ ಶಾಸಕರಿಗೆ ಸದಸ್ಯರಿಂದ ದೂರು
ಶಿರಸಿ : ಚುನಾಯಿತ ಗ್ರಾಪಂ ಪ್ರತಿನಿಧಿಗಳ ವಿರುದ್ಧ ಅಸಹಕಾರ, ಪಂಚಾಯತ ಅಭಿವೃದ್ಧಿಯಲ್ಲಿ ಹಿನ್ನಡೆ ಇತರೆ ವಿಷಯಗಳ ಕುರಿತಂತೆ ಯಡಳ್ಳಿ ಗ್ರಾಪಂ ಪಿಡಿಒ ವಿರುದ್ಧ ಶಾಸಕ ಭೀಮಣ್ಣ ನಾಯ್ಕರಿಗೆ ದೂರು ಸಲ್ಲಿಸಲಾಯಿತು. ಸುಪ್ರೀಯಾ ಹೊಟೇಲ್ ನಲ್ಲಿ ಶುಕ್ರವಾರ ಯಡಳ್ಳಿ ಗ್ರಾಮ ಪಂಚಾಯತದ ಎಲ್ಲಾ ಸದಸ್ಯರು, ಸಾರ್ವಜನಿಕರು ಸೇರಿದಂತೆ ಕಾಂಗ್ರೆಸ್ ಘಟಕದ ಪ್ರಮುಖರೂ ಸಹ ಪಿಡಿಒ ಕಮಲಾಕ್ಷ್ಮೀ ನಾಯ್ಕ ವಿರುದ್ಧ ತಮ್ಮ ದೂರನ್ನು ಶಾಸಕರಿಗೆ ಸಲ್ಲಿಸಿದರು. ಅವರನ್ನು ತಕ್ಷಣ ವರ್ಗಾವಣೆ ಮಾಡಿ ಜನಸ್ನೇಹಿ ಆಡಳಿತ ನೀಡುವ ಅಧಿಕಾರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.