ಕೆಂಗೇರಿಯಲ್ಲಿ ಕೆಲಸಕ್ಕೆ ರಜೆ ಹಾಕಿದ ಯುವತಿಗೆ ಸೈಬರ್ ಸೆಂಟರ್ ಮಾಲೀಕ ಅಶ್ಲೀಲ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಮುಸ್ಕಾನ್ ಟೈಮ್ಸ್ ಸೈಬರ್ ಸೆಂಟರ್ ಮಾಲೀಕ ಸೈಯದ್, ಲಕ್ಷ್ಮಿ ಎಂಬ ಯುವತಿಗೆ ಜ. 22 ರಂದು ರಾತ್ರಿ 7:30ರ ಸುಮಾರಿಗೆ ರಸ್ತೆಯಲ್ಲಿ ಅಡ್ಡಗಟ್ಟಿ, ಬಟ್ಟೆ ಬಿಚ್ಚಿ ಹೊಡೆಯುವುದಾಗಿ ಬೆದರಿಸಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸರು ಸೈಯದ್‌ನನ್ನು ಬಂಧಿಸಿದ್ದಾರೆ.