ಬೆಂಗಳೂರು ಉತ್ತರ: ಶಿಕ್ಷಕರಿಗೂ ಸಂಪೂರ್ಣ ಸಹಕಾರ ನೀಡುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ: ನಗರದಲ್ಲಿ ಮಧು ಬಂಗಾರಪ್ಪ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಶಿಕ್ಷಕರಿಗೆ ಬಡ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ನಾಲ್ಕು ವರ್ಷಗಳಿಂದ ಜಿಪಿಟಿ ವ್ಯವಸ್ಥೆ ಜಾರಿಯಲ್ಲಿದೆ. ಇಲ್ಲಿ ಎರಡು ಕೆಡರ್ ವ್ಯವಸ್ಥೆ ಇದೆ – ಪ್ರಿನ್ಸಿಪಲ್ ಮತ್ತು ಹೆಡ್‌ಮಾಸ್ಟರ್ ಹುದ್ದೆಗಳು. ರೇಷಿಯೋ ಆಧಾರದ ಮೇಲೆ ಶಿಕ್ಷಕರಿಗೆ ಪ್ರಮೋಷನ್ ನೀಡಲಾಗುತ್ತದೆ. ಬೋಧನೆ ಮಾಡುವ ವೇಳೆ ಐದು ಕ್ಲಾಸ್ ಇರಬೇಕೆಂಬ ನಿಯಮವಿತ್ತು. ಈ ಎಲ್ಲ ವಿಷಯಗಳನ್ನು ಕ್ಯಾಬಿನೆಟ್‌ಗೆ ತಂದು ಚರ್ಚೆ ಮಾಡುತ್ತೇವೆ. ಶಿಕ್ಷಕರಿಗೂ ಸಂಪೂರ್ಣ ಸಹಕಾರ ನೀಡುವ ನಿಟ್ಟಿನಲ್ಲಿ ಪುಟ್ಟಣ್ಣ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಾಕಷ್ಟು ಸುಧಾರಣೆಗಳನ್ನು ತಂದಿದ್ದೇವೆ.