ಬೆಂಗಳೂರು ಉತ್ತರ: ಜೇನು ಕುರುಬರು ಹಾಡಿಗೆ ಸಖತ್ತಾಗಿ ಕುಣಿದ ನಟ ವಿಜಯ್ ರಾಘವೇಂದ್ರ
Manju BK: ಜೇನು ಕುರುಬರು ಹಾಡಿಗೆ ಸಖತ್ತಾಗಿ ಕುಣಿದ ನಟ ವಿಜಯ್ವರಾಘವೇಂದ್ರ ವಿಜಯ್ ರಾಘವೇಂದ್ರ ನಾಯಕನಾಗಿನಟಿಸಿರುವ ರಿಪ್ಪನ್ ಸ್ವಾಮಿ ಸಿನಿಮಾದಿಂದ ಹೊಸ ಅಪ್ಡೇಟ್ ಸಿಕ್ಕಿದೆ. ಮಂಗಳವಾರ ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಂಜೆ ೬ ಗಂಟೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಕಿಶೋರ್ ಮೂಡುಬಿದ್ರೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಆಗಸ್ಟ್ 29ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಜೇನು ಕುರುಬರು ಅನ್ನೋ ಹಾಡಿದೆ ನಟ ವಿಜಯ್ ರಾಘವೇಂದ್ರ ಸಖತ್ ಆಗಿಯೇ ಸ್ಟೇಪ್ಸ್ ಹಾಕಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಚಿತ್ರದಲ್ಲಿ, ಅಶ್ವಿನಿ ಚಂದ್ರಶೇಖರ್ ನಾಯಕಿಯಾಗಿ ನಟಿಸಿದ್ದಾರೆ. ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.