ಬೆಂಗಳೂರು ಉತ್ತರ: ಒಳ ಮೀಸಲಾತಿ ವಿಚಾರ; ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿಂದ ಈ ಬಗ್ಗೆ ತೀರ್ಮಾನ ಆಗಿಲ್ಲ: ನಗರದಲ್ಲಿ ಬಿ.ವೈ ವಿಜಯೇಂದ್ರ
ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆಗಿಂದಲೂ ಈ ವಿಚಾರದಲ್ಲಿ ತೀರ್ಮಾನ ಮಾಡಿಲ್ಲ. ಬೊಮ್ಮಯಿ ಅವರು ಸಿಎಂ ಇದ್ದ ಸಂದರ್ಭ ಏನಿದೆ. ಆಗ ಪರಿಶಿಷ್ಟ ಜಾತಿಗೆ 17 ರಷ್ಟು ಏರಿಸಿದ್ರು, ಪರಿಶಿಷ್ಟ ಪಂಗಡಕ್ಕೆ 3ರಿಂದ 7ಕ್ಕೆ ಏರಿಸಿದ್ರು. ಆದ್ರೆ ಇವರು ಅದು ಇಂಪ್ಲೀಮೆಂಟ್ ಆಗಿಲ್ಲ ಅಂತಾರೆ, ಇವತ್ತು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ. ನಾವು ಮಾಡಿದ್ದನ್ನ ಈಗ ಇಂಪ್ಲೀಮೆಂಟ್ ಮಾಡ್ತಾರೆ. 101 ಜಾತಿಗಳಿಗೆ ಅನ್ಯಾಯ ಆಗಬಾರದು ಎಂದರು.