ಕಮಲಾಪುರ: ಮಳಸಾಪೂರ ಸೇರಿ ಹಲವಡೆ ಭೂ ಕಂಪನ: ಗ್ರಾಮಸ್ಥರಲ್ಲಿ ಆತಂಕ, ತಹಶೀಲ್ದಾರರ ಭೇಟಿ
ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಸಾಪೂರ ಗ್ರಾಮ ಹಾಗೂ ಸೂತ್ತಲು 2.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಭೂಮಿ ಕಂಪಿಸಿದ ಪರಿಣಾಮ ಸ್ಥಳೀಯರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ. ಈ ಕುರಿತು ಮಾಹಿತಿ ಪಡೆದ ಕಮಲಾಪುರ ತಾಲ್ಲೂಕು ತಹಶೀಲ್ದಾರ್ ಅವರು ಮಳಸಾಪೂರ ಮತ್ತು ಪಟವಾದ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಭೂಕಂಪದ ಬಗ್ಗೆ ವಿಚಾರಿಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಹೇಳಿದರು ಎಂದು ಶೆನಿವಾರ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ....