ಪಾವಗಡ: ಹೊನ್ನಮೇಡಿ ಗ್ರಾಮದಲ್ಲಿ ಕುಡಿಯುವ ನೀರು, ದೀಪವಿಲ್ಲದೆ ಜನರ ಪರದಾಟ
ಪಾವಗಡ ತಾಲೂಕಿನ ಹೊನ್ನಮೇಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನ ಹೈರಾಣಾಗಿದ್ದಾರೆ. 3-4 ಕಿ.ಮೀ. ದೂರದಿಂದ ನೀರು ತರುವ ದುಸ್ಥಿತಿ ನಿರ್ಮಾಣವಾಗಿದ್ದು, ಬೀದಿ ದೀಪಗಳ ಕೊರತೆ ಮತ್ತು ಅರ್ಧಕ್ಕೆ ನಿಂತ ಕಾಮಗಾರಿಗಳಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ತಾಪಂ ಆಕಾಂಕ್ಷಿ ವಿಷ್ಣು ನಂದೀಶ್ವರಡು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ.