Public App Logo
ನೂತನ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ದೇವೇಂದ್ರ ಎಚ್. ಯರಗೋಳ ಅವರಿಗೆ ಉಪ್ಪಾರ ಸಮಾಜದಿಂದ ಭವ್ಯ ಸನ್ಮಾನ ​ಯಾದಗಿರಿ: ನಗರದ ಜಿಲ್ಲಾ ಉಪ್ಪಾರ ಸಮಾಜದ ಕಾರ್ಯಾಲಯದಲ್ಲಿ ಇಂದು ನೂತನವಾಗಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾರತ ಸರ್ಕಾರದ ನೋಟರಿ ಹಾಗೂ ವಕೀಲರಾದ ಶ್ರೀ ದೇವೇಂದ್ರ ಎಚ್. ಯರಗೋಳ ಅವರನ್ನು ಭಗೀರಥ ಉಪ್ಪಾರ ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ​ಯಾದಗಿರಿ ಭಗೀರಥ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕಟ್ಟಿಮನಿ ಅವರ ನೇತೃತ್ವದಲ್ಲಿ ನಡೆದ ಈ ಶ್ಲಾಘನೀಯ ಕಾರ್ಯಕ್ರಮದಲ್ಲಿ, ನೂತನ ಉಪಾಧ್ಯಕ್ಷರಿಗೆ ಶಾಲು ಹೊದಿಸಿ, ಮಾಲೆ ಹಾಕಿ ಶುಭ ಹಾರೈಸಲಾಯಿತು. ​ಈ ಸಂದರ್ಭದಲ್ಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಸುಭಾಷ್‌ಚಂದ್ರ ಕೋಟ್ಗೇರಿ, ಹಿರಿಯ ಮುಖಂಡರಾದ ಲಕ್ಷ್ಮಣ ಸಾಹುಕಾರ್ ಖಾನಾಪುರ್, ಯಂಕಣ್ಣ ಗೌಡ ಪಾಟೀಲ್ ಹೆಬ್ಬಾಳ್, ವಕೀಲರು ಹಾಗೂ ಟೈಪಿಸ್ಟ್ ಕೃಷ್ಣ ಅಣಿಕೇರಿ, ಶಿಕ್ಷಕರಾದ ರಾಘವೇಂದ್ರ ಐಕೂರ್, ಸಿದ್ದಣ್ಣ ದುರ್ಗದ, ಶಿಕ್ಷಕರಾದ ಮೌನೇಶ್ ಬಂಗಿ ಕೋಟಗೇರಾ, ಕಾಶಿರಾವ್ ಕ್ಷೀರಸಾಗರ, ಭೀಮಷಪ್ಪ ಕಣೆಕಲ್, ಯಂಕಪ್ಪ ಗೋಪಾಳಪುರ, ರಾಘವೇಂದ್ರ ಸಾಹುಕಾರ ಖಾನಾಪುರ, ಮಾರ್ತಾಂಡಪ್ಪ ಕಟ್ಟಿಮನಿ, ರಾಘವೇಂದ್ರ ಕಟ್ಟಿಮನಿ, ಸತೀಶ ಕಟ್ಟಿಮನಿ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಬಂಧುಗಳು ಉಪಸ್ಥಿತರಿದ್ದರು. - Yadgir News