ರಾಯಚೂರು: ಪ್ರಯಾಣಿಕರಿಗೆ ಬೇಕಾದ ಸಮಯದಲ್ಲಿ ಸಾರಿಗೆ ಬಸ್ಸುಗಳ ಕೊರತೆ
ರಾಯಚೂರಿನಿಂದ ಲಿಂಗಸುಗೂರು ಮತ್ತು ಸಿಂಧನೂರು ಮಾರ್ಗವಾಗಿ ತೆರಳುವ ಪ್ರಯಾಣಿಕರಿಗೆ ಬೆಳಗ್ಗೆ 6 ಗಂಟೆಯಿಂದ 8 ಗಂಟೆ ವರೆಗೆ ಮತ್ತು ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಸಾರಿಗೆ ಬಸ್ಸುಗಳ ಸಮಸ್ಯೆ ಇದ್ದು ಪ್ರಯಾಣಿಕರು ಇರುವ ಒಂದೆರೆಡು ಬಸ್ಸುಗಳಲ್ಲೆ ನಿಂತು ಪ್ರಯಾಣಿಸುವ ಪರಿಸ್ಥಿತಿ ಇದೆ. ಇನ್ನು ಕೆಲ ಸಮಯದಲ್ಲಿ ಪ್ರಯಾಣಿಕರಿಲ್ಲದೇ 2-3 ಬಸ್ಸುಗಳು ಒಟ್ಟೊಟ್ಟಿಗೆ ಹೋಗುತ್ತವೆ ಎಂದು ಸೋಮವಾರ ಬೆಳಿಗ್ಗೆ 7 ಗಂಟೆಗೆ ನಿತ್ಯ ಓಡಾಡುವ ಪ್ರಯಾಣಿಕರೊಬ್ಬರು ಮಾಹಿತಿ ನೀಡಿದರು.