ಚಿಂತಾಮಣಿ ತಾಲೂಕಿನ ಯರಕೋಟೆ ಗ್ರಾಮದ ಅಭಿವೃದ್ಧಿಗೆ ಕೇಂದ್ರ,ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳಿಂದ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಯರಕೋಟೆ ಗ್ರಾಮದಿಂದ ಬೆಂಗಳೂರು ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಆರಂಭಿಸಲಾಗಿದೆ.ಯರಕೋಟೆ ಗ್ರಾಮದ ಮಂಜುನಾಥ್ ವೈ ಎನ್ ಎಂಬುವರು ತಮ್ಮ ಗ್ರಾಮದಿಂದ ಬೆಂಗಳೂರಿಗೆ ಪಾದಯಾತ್ರೆ ಬೆಳೆಸಿದ್ದಾರೆ. ಗ್ರಾಮದ ಶ್ರೀ ಗಂಗಮ್ಮ ದೇವಸ್ಥಾನದಿಂದ ನಾಲ್ಕು ದಿನಗಳ ಕಾಲ್ನಡಿಗೆ ಜನಜಾಥಾ ಮತ್ತು ರಥಯಾತ್ರೆ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಯರಕೋಟೆ ಗ್ರಾಮದ ಬಗ್ಗೆ ಹಿರಿಯರಾದ ನೀರಗಂಟಿ ಚಿಂತಪ್ಪನವರು ಹೇಳಿದ ಕಥೆಗಳಿಂದ ಪ್ರೇರಿತಗೊಂಡು 32 ವರ್ಷಗಳ ಕಾಲ ಒಂದು ಗ್ರಾಮದ ಅಭಿವೃದ್ಧಿಯ ಬಗ್ಗೆ ಅಧ್ಯಯನ ಮಾಡಿ 156 ಗ್ರಾಮಗಳಿಗೆ ಸಂಚಾರ ಮಾಡಿದ್ದೇನೆ ಎಂದರು.