Public App Logo
Jansamasya
National
Bihar
Madhya_pradesh
Indianrailways
Patanjali
New_delhi
Chandigarh
South_delhi
Shahdara
Beattheheat
���हीद_दिवस
Swachhbharat
North_east_delhi
Nagaland
East_delhi
Tbmuktbharat
North_delhi
West_delhi
Responsiblerailyatri
Notoadulteration
Railinfra4uttarpradesh
Railone
North_west_delhi
���िश्व_जल_दिवस
Capacitybuilding
Worldwaterday
Educationforall
Railsafety
Chaitranavratri

ಸಿದ್ಧಾಪುರ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಗಳಲ್ಲಿಯೂ ಆಸಕ್ತಿಯಿಂದ ತೊಡಗಿಸಿಕೊಳ್ಳಿ ಸಿದ್ದಾಪುರ ತಾಲ್ಲೂಕಿನ ಕೋಲಶಿರ್ಸಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಕರೆ

ಸಿದ್ದಾಪುರ:- ಪಠ್ಯ ಚಟುವಟಿಕೆಯ ಜೊತೆಗೆ ಪಠ್ಯೇತರ ಚಟುವಟಿಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡು, ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುವ ಮುಖಾಂತರ ನಿಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಲು ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ಸಿದ್ದಾಪುರ ತಾಲೂಕಿನ ಕೋಲಶಿರ್ಸಿಯಲ್ಲಿ ಸೋಮವಾರ ಸಂಜೆ 4 ಗಂಟೆಗೆ ನಡೆದ ಆಧಾರ ಶಿಕ್ಷಣ, ಸ್ವ-ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಪತ್ರಕರ್ತ ದಿ. ಶಿವಶಂಕರ್ ಕೋಲಶಿರ್ಸಿ ಅವರ ನೆನಪಿನ "ಕಲರವ - 2025" ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.‌ ಶಿಕ್ಷಣವು ನಮಗೆ ಒಳ್ಳೆಯ ಸಂಸ್ಕಾರ ನೀಡುತ್ತದೆ ಎಂದರು.