ಸಿದ್ಧಾಪುರ: ದಿಗೋಡಿ ಸಮೀಪ ರಸ್ತೆ ಕಾಮಗಾರಿ ಕಳಪೆಯಾಗಿದ್ದನ್ನು ಸ್ವತಃ ಪರಿಶೀಲನೆ ನಡೆಸಿದ ಶಾಸಕ ಭೀಮಣ್ಣ
ಸಿದ್ದಾಪುರ : ಸಿದ್ದಾಪುರಕ್ಕೆ ಭೇಟಿ ನೀಡಿ ಹಿಂದಿರುಗಿ ಶಿರಸಿಗೆ ಬರುವಾಗ ಲೊಕೊಪಯೋಗಿ ರಸ್ತೆಯ ಕಳಪೆ ಗುಣಮಟ್ಟದ ಕಾಮಗಾರಿ ನೋಡಿ ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ. ಹೆಗ್ಗರಣಿ ಮುಖ್ಯ ರಸ್ತೆಯ ದಿಗೋಡಿ ಹತ್ತಿರ ಪಿಡಬ್ಲುಡಿ ರಸ್ತೆಯ ಅಗಲೀಕರಣ ಕಾಮಗಾರಿ ವೀಕ್ಷಿಸಿದ ಶಾಸಕರು, ಕಳಪೆ ಡಾಂಬರಿಕರಣವನ್ನು ಸ್ವತಃ ತಾವೇ ಮುಟ್ಟಿನೋಡಿ ಸಂಬಂಧಿ ಅದಿಕಾರಿಗಳಿಗೆ ಅಲ್ಲಿಂದಲೇ ಬಿಸಿಮುಟ್ಟಿಸಿದ್ದಾರೆ. ಬಳಿಕ ಮರು ಡಾಂಬರೀಕರಣಕ್ಕೆ ಶಾಸಕರು ಖಡಕ್ ಸೂಚನೆ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡ ಪ್ರವೀಣ ಗೌಡ ತೆಪ್ಪಾರ್ ಇತರರು ಇದ್ದರು.